Loading...
ಮನರಂಜನೆ

ಅಗ್ನಿಸಾಕ್ಷಿ ಧಾರವಾಹಿಯಿಂದ ಸಿದ್ಧಾರ್ಥ್ ಹೊರಬರಲು ನಿಜವಾದ ಕಾರಣವೇನು ಗೊತ್ತಾ?

ಕನ್ನಡದ ಪ್ರಖ್ಯಾತ ಧಾರವಾಹಿ ಅಗ್ನಿಸಾಕ್ಷಿ ಧಾರವಾಹಿಯಿಂದ ಸಿದ್ಧಾರ್ಥ್ ಪಾತ್ರಧಾರಿ ನಟ ವಿಜಯ್ ಸೂರ್ಯ ಹೊರ ಬಂದಿದ್ದಾರೆ..

ಹೌದು ಇತ್ತಿಚೆಗೆ ತಾನೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ವಿಜಯ್ ಸೂರ್ಯ ಇದೀಗ ಧಾರವಾಹಿಯಿಂದ ಹೊರ ಬರುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತಿತ್ತು..

ಆದರೆ ವಿಜಯ್ ಧಾರವಾಹಿಯಿಂದ ಹೊರ ಬರಲು ನಿಜವಾದ ಕಾರಣ ಬೇರೆಯೇ ಇದೆ.. ಹೌದು ವಿಜಯ್ ಅಗ್ನಿಸಾಕ್ಷಿ ಧಾರವಾಹಿಗೆ ಬಂದು 5 ವರ್ಷಗಳಾಗಿದೆ.. 5 ವರ್ಷಗಳಿಂದ ಸಾಕಷ್ಟು ಹೆಸರು ಮಾಡಿದ ವಿಜಯ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ಧಾರವಾಹಿ ಶುರುವಿನಲ್ಲಿ 5 ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದರು‌. ಇದೀಗ ಅಗ್ರಿಮೆಂಟ್ ಮುಗಿದ ಕಾರಣ ಧಾರವಾಹಿಯಿಂದ ಹೊರ ಬಂದಿದ್ದಾರೆ..

ಧಾರವಾಹಿಯಲ್ಲಿ ಸಿದ್ಧಾರ್ಥ್ ಪಾತ್ರ ಆಸ್ಟ್ರೇಲಿಯಾಗೆ ಹೋಗುತ್ತಿರುವುದಾಗಿ ತೋರಿಸಲಾಗುತ್ತಿದೆ.. ಆ ಮೂಲಕ ಸಿದ್ಧಾರ್ಥ್ ಪಾತ್ರ ಕೊನೆಯಾಗಲಿದೆ..

5 ವರ್ಷ ಒಟ್ಟಿಗೆ ನಟಿಸಿದ ಸಿದ್ಧಾರ್ಥ್ ನನ್ನು ಸನ್ನಿಧಿ ನೆನೆದು ಸಾಮಾಜಿಕ ಜಾಲತಾಣದಲ್ಲಿ ವಿಜಯ್ ನನ್ನು ಮಿಸ್ ಮಾಡಿಕೊಳ್ಳುವುದಾಗಿಯೂ ಮುಂದಿನ ಜೀವನಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ ಸನ್ನಿಧಿ..