Loading...
ರಾಜ್ಯ ಸುದ್ದಿ

ಕಾಂಗ್ರೆಸ್ ಮುಖಂಡನ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮೆಷಿನ್ ಇದೆ.. ಸಿ ಪಿ ಯೋಗೇಶ್ವರ್ ಹೇಳಿದ್ದು ಯಾರ ಬಗ್ಗೆ ಗೊತ್ತಾ?

ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐ ಗೆ ವಹಿಸುತ್ತಿದ್ದಂತೆ.. ಇತ್ತ ದೇವೇ ಗೌಡರು ಫೋನ್ ಟ್ಯಾಪಿಂಗ್ ಮಾಡೋದು ತಪ್ಪಲ್ಲ ಎಂಬ ಹೇಳಿಕೆ ಕೊಟ್ಟಿದ್ದಾರೆ.. ಅಷ್ಟೇ ಅಲ್ಲದೆ ಸಿಬಿಐ ಗೆ ಕೊಟ್ಟಿರೋದಕ್ಕೆ ಮೋದಿ ಅಮಿತ್ ಶಾ ಕಾರಣ ಅಲ್ಲ.. ಅವರು ಕಾಶ್ಮೀರದ ವಿಚಾರದಲ್ಲಿ ಬ್ಯುಸಿ ಇದ್ದಾರೆ.‌.. ಇದೆಲ್ಲಾ ಯಡಿಯೂರಪ್ಪ ಅವರ ಕೆಲಸ ಎಂದಿದ್ದರು..

ಇದೀಗ ಇದೇ ವಿಷಯದ ಕುರಿತು ಯೋಗೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು ಡಿಕೆ ಶಿವಕುಮಾರ್ ಅವರ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮೆಷಿನ್ ಇದೆ ಎಂದಿದ್ದಾರೆ..

ಅಷ್ಟೇ ಅಲ್ಲದೆ ಈ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ.. ಅವರು ಕೋಟ್ಯಂತರ ರೂಪಾಯಿ ವ್ಯಯಿಸಿ ಫೋನ್ ಟ್ಯಾಪಿಂಗ್ ಡಿವೈಸ್ ತಂದು ಇಟ್ಟುಕೊಂಡಿದ್ದಾರೆ.. ಆ ಡಿವೈಸ್ ನ ಮೂಲಕ ಯಾರ ಫೋನು ಬೇಕಾದರೂ ಕದ್ದಾಲಿಸುತ್ತಾರೆ ಎಂಬ ಮಾಹಿತಿ ಇದೆ.. ಹೀಗಾಗಿ ಈ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆ ಎಂದಿದ್ದಾರೆ..