Loading...
ಕ್ರೀಡೆ

ಭಾರತ ಮಾತೆಯ ಹೆಮ್ಮೆಯ ಪುತ್ರಿ ದೇಶಕ್ಕೆ ಚಿನ್ನ ತಂದುಕೊಟ್ಟ ಹಿಮದಾಸ್ ಗೆ ಇಂಗ್ಲೀಷ್‌ ಬರೊಲ್ಲ ಅಂತ ಅವಮಾನ ಮಾಡಿದ್ರಾ?? ಇಲ್ಲಿದೆ ನೋಡಿ

ಫಿನ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ತಂದುಕೊಟ್ಟ ಹಿಮಾ ದಾಸ್‍ಗೆ ಭಾರತೀಯ ಅಥ್ಲೆಟಿಕ್ ಒಕ್ಕೂಟ ಅವಮಾನ ಮಾಡಿತಾ??

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗುರುವಾರ ಭಾರತದ ಅಥ್ಲೀಟ್ ಹಿಮಾದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. ಆದರೆ ಹಿಮಾದಾಸ್ ಫೈನಲ್ ಗೆಲ್ಲುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಡಿಯೋವನ್ನು ಎಎಫ್‍ಐ ಟ್ವೀಟ್ ಮಾಡಿತ್ತು.

ಈ ವೇಳೆ ಹಿಮಾದಾಸ್ ತನಗೆ ತಿಳಿಸಿದ ಇಂಗ್ಲಿಷ್ ನಲ್ಲಿ ಮಾತನಾಡಿದರು. ಆದರೆ ಹಿಮಾ ಅವರ ಭಾಷೆ ಸುಲಲಿತವಾಗಿಲ್ಲ ಎಂದು ಎಎಫ್‍ಐ ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿತ್ತು. ಅಲ್ಲದೇ ಫೈನಲ್ ಗೆ ಅರ್ಹತೆ ಪಡೆದಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ಫೈನಲ್‍ನಲ್ಲಿಯೂ ಉತ್ತಮ ಸಾಧನೆ ಮಾಡಿ ಎಂದು ಶುಭ ಹಾರೈಸಿತ್ತು. ಸದ್ಯ ಎಎಫ್‍ಐ ಮಾಡಿದ ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಹಿಮಾ ಅವರ ಸಾಮರ್ಥ್ಯ ಪರಿಗಣಿಸದ ಎಎಫ್‍ಐ ಅವರ ಭಾಷೆಯ ಬಗ್ಗೆ ಮಾತನಾಡಿ ಅಗೌರವ ತೋರಿದೆ. ಈ ಮೂಲಕ ಅವರ ಸಾಧನೆಯನ್ನು ಮರೆಮಾಚಿದೆ ಎಂದು ಮರುಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

18 ನೇ ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಹಿಮಾ ದಾಸ್ ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದರು.

ಯಾರು ಏನೇ ಹೇಳಲಿ.. ದೇಶದ ಹೆಮ್ಮೆಯ ಪುತ್ರಿ ಹಿಮದಾಸ್ ಗೆ ನಮ್ಮೆಲ್ಲರ ಕಡೆಯಿಂದ ಶುಭಾಶಯ ತಿಳಿಸೋಣವೇ??

Leave a Reply

Your email address will not be published. Required fields are marked *