Loading...
ಸಿನಿಮಾ

ರಘು ದೀಕ್ಷಿತ್ ಹಾಗೂ ಮಯೂರಿ ವಿಚ್ಛೇದನಕ್ಕೆ ನಿಜವಾದ ಕಾರಣವೇನು ಗೊತ್ತಾ? ನಾನು ಉತ್ತಮ ಗಂಡನಾಗಲಿಲ್ಲ ಎಂದ ರಘು ಧೀಕ್ಷಿತ್

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಗಾಯಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ಅವರ ದಾಂಪತ್ಯ ಜೀವನ ಬಿರುಕು ಬಿಟ್ಟಿದ್ದು, ಇದೀಗ ವಿಚ್ಛೇಧನಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ದಾರೆ.

ಕಳೆದ ಒಂದು ವರ್ಷದಿಂದ ರಘು ಧೀಕ್ಷಿತ್ ಹಾಗೂ ಮಯೂರಿ ಅವರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಇದೀಗ ಅಧಿಕೃತವಾಗಿ ದೂರವಾಗಲು ರ್ನಿರಿಸಿದ್ದಾರೆ. ಕಳೆದ ಶುಕ್ರವಾರ ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾರೊಬ್ಬರೂ ಕೂಡ ಇನ್ನೊಬ್ಬರ ಮೇಲೆ ಆರೋಪ ಮಾಡಿಲ್ಲ. ಇಬ್ಬರೂ ಪರಸ್ಪರ ಒಪ್ಪಿಗೆ ಸೂಚಿಸಿ ಡಿವೋರ್ಸ್ ಕೇಳಿದ್ದಾರೆ.
ಹಿಂದೂ ವಿವಾಹ ಕಾಯಿದೆ ಅಡಿ ಕೋರ್ಟ್‌ಗೆ ಡಿವೋರ್ಸ್ ಅರ್ಜಿ ಸಲ್ಲಿಸಿದ್ದು, ಕೋರ್ಟ್ ೬ ತಿಂಗಳ ಕಾಲ ಸಮಯಾವಕಾಶ ನೀಡಿದೆ. ಈ ಆವಧಿಯಲ್ಲಿ ಈ ಇಬ್ಬರು ಮನಸ್ಸು ಬದಲಿಸಿ ಡಿವೋರ್ಸ್ ಅರ್ಜಿಯನ್ನು ವಾಪಸ್ ಪಡೆಯಬಹುದಾಗಿದೆ.
ಆದರೆ ಕೆಲ ವರ್ಷಗಳಿಂದಲೇ ಮಯೂರಿ ಹಾಗೂ ರಘು ದೀಕ್ಷಿತ್ ನಡುವೆ ಸಂಬಂಧ ಹಾಳಾಗಿತ್ತು. ಈ ವಿಷಯ ಕಳೆದ ಕೆಲ ತಿಂಗಳ ಹಿಂದೆ ಮೀಟೂ ಆರೋಪದ ಸಮಯದಲ್ಲೂ ಬಯಲಾಗಿತ್ತು..


ಗಾಯಕಿ ಚಿನ್ಮಯಿ ಶ್ರೀಪಾದ ಅವರು ರಘು ದೀಕ್ಷಿತ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಚಿನ್ಮಯ್ ತನ್ನ ಸ್ನೇಹಿತರಿಗೆ ಆದ ಅನುಭವಗಳನ್ನು ೨ ಪತ್ರಗಳ ಮೂಲಕ ತಿಳಿಸಿದ್ದರು.
ಈ ಆರೋಪವನ್ನು ಸತ್ಯವೆಂದು ಒಪ್ಪಿಕೊಂಡಿದ್ದ ರಘು ದೀಕ್ಷಿತ್, ನಾನು ಆಕೆಯನ್ನ ಹಗ್ ಮಾಡಿ ಕಿಸ್ ಮಾಡುವುದಕ್ಕೆ ಪ್ರಯತ್ನಿಸಿದ್ದು ನಿಜ, ಆದರೆ ಅದಕ್ಕೆ ನಾನು ಕ್ಷಮೆ ಕೂಡ ಕೇಳಿದ್ದೇನೆ. ಈಗಲೂ ಕ್ಷಮೆ ಕೇಳುತ್ತೇನೆ ಎಂದಿದ್ದರು.

ಅದೇ ಸಮಯದಲ್ಲಿ ಮಯೂರಿ ಅವರು ಕೂಡ ಪ್ರತಿಕ್ರಿಯಿಸಿ ಲೈಂಗಿಕ ಕಿರುಕುಳಕ್ಕೆ ಬಲಿಪಶುಗಳಾದ ಪರವಾಗಿ ನಾನು ಸದಾ ನಿಲ್ಲುತ್ತೇನೆ. ಅಲ್ಲದೆ ಸದಾ ನನ್ನ ಬೆಂಬಲವಿದೆ. ಇಂತಹ ಕಿರುಕುಳ ಆದಾಗ ಕಾನೂನು ಹೋರಾಟ ಮಾಡೋದು ಸೂಕ್ತ ಎನಿಸಿಸುತ್ತದೆ. ಯಾಕೆಂದರೆ ಆಗ ಇತರೆ ಮಹಿಳೆಯರ ಘನತೆಗೆ ಚ್ಯುತಿ ತರುವ ಧೈರ್ಯ ಪುರುಷರಿಗೆ ಬರಲ್ಲವೆಂದು ಅಂದುಕೊಂಡಿದ್ದೇನೆ ಎಂದು ಹೇಳಿದ್ದರು.

ಇದೀಗ ಇಬ್ಬರು ಕಾನೂನಿನ ಮೂಲಕ ದೂರವಾಗಲು ನಿರ್ಧರಿಸಿದ್ದಾರೆ. ಗಾಯಕ ರಘು ಧೀಕ್ಷಿತ್ ಅವರು ನಾಣು ಮಯೂರಿಗೆ ಒಳ್ಳೆಯ ಗಂಡನಾಗಲಿಲ್ಲ ಎಂದು ತಮ್ ಆಪ್ತರಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.