Loading...
ರಾಜಕೀಯ

ಸುಮಲತಾರ ಕ್ಷಮೆ ಕೇಳಿದ.. ಮೊದಲ ಮತ ನೀಡಿದ್ದ ಯೋಧ..

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಯೋಧರೊಬ್ಬರು ಅಂಚೆ ಮೂಲಕ ಸುಮಲತಾ ಅವರಿಗೆ ಮತ ನೀಡಿದ್ದರು.. ಹೌದು ಸಾಮಾನ್ಯ ಮತದಾನಕ್ಕೂ ಮುನ್ನ ಅಂಚೆ ಮತದಾನ ನಡೆಯುವುದರಿಂದ ಸುಮಲತಾರಿಗೆ ಬಿದ್ದ ಮೊದಲ ಮತವೆಂದೇ ಇದನ್ನು ಹೇಳಲಾಗಿತ್ತು‌…

ಆ ಯೋಧ ತಾವು ವೋಟ್ ಮಾಡಿದ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿ ಮಂಡ್ಯ ಮತದಾರರೆಲ್ಲರಿಗೂ ಸುಮಲತಾ ಅವರಿಗೆ ಮತ ನೀಡಲು ಮನವಿ ಮಾಡಿದ್ದರು..

ಆ ಫೋಟೋ ವೈರಲ್ ಕೂಡ ಆಗಿತ್ತು.. ಸ್ವತಃ ಸುಮಲತಾ ಅವರೂ ಕೂಡ ಈ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿ ಯೋಧನಿಗೆ ಧನ್ಯವಾದ ತಿಳಿಸಿದ್ದರು..

ಆದರೆ ಇದೀಗ ಅದೇ ಯೋಧ ಸುಮಲತಾರನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದಾರೆ.. ಹೌದು ಸುಮಲತಾ ಅವರಿಗೆ ಮತ ನೀಡಿದ ಫೋಟೋವನ್ನು ಬಹಿರಂಗವಾಗಿ ಹಾಕಿದ್ದಕ್ಕೆ ಅವರ ವೋಟ್ ಅನ್ನು ಅಮಾನ್ಯ ಮಾಡಲಾಗಿತ್ತು.. ಅದಕ್ಕಾಗಿಯೇ ಇದೀಗ ಮನೆಗೆ ರಜೆ ಮೇಲೆ ಬಂದ ಯೋಧ ಸೀದಾ ಸುಮಲತಾ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದಾರೆ..

ಇದೇ ವೇಳೆ ಸುಮಲತಾ ಅವರಿಗೆ ತೆಂಗಿನ ಸಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.. ಅಷ್ಟೇ ಅಲ್ಲದೆ ಸುಮಲತಾ ಅವರೂ ಕೂಡ ಒಂದು ತೆಂಗಿನ ಸಸಿಯನ್ನು ಯೋಧ ರಾಜನಾಯಕ್ ಅವರಿಗೆ ನೀಡಿದ್ದಾರೆ..